ಐತರೇಯ: ‘ಇತರಾ’ದಿಂದ ಬಂದಿದೆ. ಇತರಾ ಎಂಬುವಳ ಪುತ್ರನಿರಬಹುದು. ಐತರೇಯ ಬ್ರಾಹಣ, ಐತರೇಯ ಆರಣ್ಯಕ, ಐತರೇಯ ಉಪನಿಷತ್ತು ಎಂಬ ಗ್ರಂಥಗಳು, ಈ ಹೆಸರಿನಲ್ಲಿ ಉಪಲಬ್ಧವಾಗಿವೆ. ಸಾಯಣಾಚಾರ್ಯರ ಪ್ರಕಾರ ಇತರಾ ಎಂಬವಳು ಬಹು ಪ್ರಾಚೀನನಾದ ಒಬ್ಬ ಋಷಿಯ ಪತ್ನಿ. ಇವಳಲ್ಲಿ ಜನಿಸಿದ ಪುತ್ರ ಮಹೀದಾಸ ಐತರೇಯ. ಈ ವಿಚಾರವಾಗಿ ಐತರೇಯ ಆರಣ್ಯಕದಲ್ಲಿ ಉಲ್ಲೇಖವಿದೆ.  (ಬಿ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ